Monday, March 24, 2008

ನನ್ನ ಗಾನ ವಿಮಾನ

ದೂರಕೆ ದೂರಕೆ ಬಹು ಬಹು ದೂರಕೆ ಹಾರುವೆ ಗಾನ ವಿಮನದಲಿ ..........

ನನ್ನ ಕನಸಿನ ಗಾನ ವಿಮಾನ ಮೆಲ್ಲಗೆ ಕುಸಿಯುವ ಸ್ಥಿತಿಯಲ್ಲಿದೆ ... ನಾನು ಮನಸ್ಸು ತುಂಬಿ ಹಾಡಿ ಯಾವ ಕಾಲ ಆಗಿದೆ ... ನೆನ್ನೆ ಸಂಜೆ ಹಾಗೆ ಸುಮ್ಮನೆ ಹಾಡಲು ಶುರು ಮಾಡಿದ್ದೆ ... ಧ್ವನಿ ಮತ್ತು ಉಸಿರು ಎರಡೂ ಚೆನ್ನಾಗಿ ಬರಲಿಲ್ಲ ... ಸಂಗೀತದಿಂದ ನನ್ನ ಮನಸ್ಸಿಗೆ ಸಮಾಧಾನ ಸಿಗುವ ಬದಲು ಅತಿ ಅಸಮಧಾನವೇ ಆಗಿತ್ತು ... ಪ್ರತಿ ದಿನ ಅಭ್ಯಾಸ ಮಾಡಿ ಹಾಡಿದಾಗ ಸಿಗುವ ಸಂತೋಷ ಹೀಗೆ, ಹುಣ್ಣಿಮೆಯೋ ಅಮವಸ್ಯೆಗೋ ಒಮ್ಮೆ ಹಾಡಿದಾಗ ಆಗುವ ದುಃಖ ಹೇಗೆ ಎಂದು ಬಹಳ ಚೆನ್ನಾಗಿಯೇ ಅರಿವಾಯಿತು.

ವಸುಮತಿ madamರನ್ನು ಎಷ್ಟು miss ಮಾಡಿಕೊಳ್ಳುತಿದ್ದೀನಿ ... ಪ್ರತಿ ದಿನ ಮಧ್ಯಾನ college ಮುಗಿಸಿ ಅವರ ಮನೆಗೆ ಸಂಗೀತ ಪಾಠಕ್ಕೆ ಹೋಗುತಿದ್ದೆ ... ನಮ್ಮಿಬ್ಬರಿಗೂ ತೃಪ್ತಿ ಆಗುವಷ್ಟು ಹಾಡಿ, ಅವರು ಕಲಿಸಿ, ನಾನು ಕಲಿತು, ಸಂಗೀತದ ಜಗತ್ತಿನಲ್ಲೇ ಹರಟೆ ಹೊಡೆದು, ಲೋಕದಲ್ಲೇ ಲೀನರಾಗಿ finally ಘಂಟೆ ನಾಕು ಹೊಡೆದಾಗ "aunty ನೀವಿನ್ನು ಊಟ ಮಾಡಿ " ಅಂತ ಹೇಳಿ ನಾನು ಹೊರಟು ಮನೆಗೆ ಬರುತಿದ್ದೆ ... ಮನೆಗೆ ಬರುವ ದಾರಿಯುದ್ದಕ್ಕೂ ದಿನ ಹೊಸದಾಗಿ ಕಲಿತಿದ್ದ ರಾಗ ಅಥವಾ ಹೊಸ ಹಾಡನ್ನೇ ಗುನುಗುತ್ತಾ ನನ್ನದೇ ಲೋಕದಲ್ಲಿ drive ಮಾಡುತಿದ್ದೆ ... ಒಮ್ಮೊಮ್ಮೆ ಮಳೆ ಬಂದರಂತೂ ನನ್ನನ್ನು ಹಿಡಿಯುವರೇ ಇರುತ್ತಿರಲಿಲ್ಲ ... ಮಳೆ ಹನಿ ಸಣ್ಣಕ್ಕೆ ನನ್ನ ಕೈ ಮೇಲೆ ಬೀಳುತ್ತಿರುವಾಗ ನಾನು full excitementನಲ್ಲಿ ಹಾಡುತ್ತಾ.. drive ಮಾಡಿದ್ದ ದಿನಗಳು ... ಸಿಕ್ಕಾಪಟ್ಟೆ miss ಮಾಡ್ಕೊತೀನಿ ... those lovely days in my own music world ...

ದಿನಗಳೇ ಸುದಿನ ...

1 comment:

Indranil said...
This comment has been removed by the author.